ಕಾನ್ರಾಡ್, ಮೈಕೇಲ್ ಜಾರ್ಜ್

 1846-1927. ಜರ್ಮನ್ ಕಾದಂಬರಿಕಾರ, ವಿಮರ್ಶಕ. ಎಮಿಲ್ ಜೊóೀಲನ ಆದರ್ಶಗಳಿಂದ ಸ್ಫೂರ್ತಿಪಡೆದನೆನ್ನಲಾಗಿದೆ. ಈತ 1885 ರಲ್ಲಿ ಕಾರ್ಲ್ ಬ್ಲೀಬ್ ಟ್ರ್ಯೂನೊಂದಿಗೆ ಸೇರಿದ ಗೆಸೆಲ್ ಷ್ಯಾಫ್ಟ್ (ಸಮಾಜ) ಎಂಬ ನಿಸರ್ಗವಾದದ ಸಾಹಿತ್ಯಾವಲೋಕನ ಪತ್ರಿಕೆಯನ್ನು ಆರಂಭಿಸಿದ. ಆಧುನಿಕ ಜರ್ಮನ್ ಸಾಹಿತ್ಯದ ತರುಣ ಲೇಖಕರಿಗೆ ಇದೊಂದು ಕೇಂದ್ರವಾಯಿತು. ಈತನ ಕೃತಿಗಳಲ್ಲಿ ಒಂದು ಸಂಪುಟದಷ್ಟು ವಿಮರ್ಶಾ ಲೇಖನಗಳಿವೆ ಮದಾಂ ಲುಟೇಷಿಯಾ (1883) ವಾಜ್ó ಡಿ ಇಸಾóರ್ ರಾಷ್ಟ್ (ವಾಟ್ ದಿ ಇಸಾರ್ ಮರ್ಮರ್ಸ್) eóÉೂೀಲನ ಕಾದಂಬರಿಗಳನ್ನು ಹೋಲುತ್ತವೆ.

 ಪ್ಲಾಬರ್, ಮೊಪಾಸಾ ಮತ್ತು ಜೋóಲ ಪ್ರತಿಪಾದಿಸಿದ ವಾಸ್ತವತೆ ಸಾಹಿತ್ಯದ ರೂಪರೇಷೆಗಳನ್ನು ಬದಲಿಸಿತು. ಟಾಲ್‍ಸ್ಟಾಯ್ ಮತ್ತು ದಾಸ್ತಯೆವ್‍ಸ್ಕಿ ಇವರ ಕೃತಿಗಳ ವಾಸ್ತವತಾ ವಾದಕ್ಕೆ ಹೆಚ್ಚಿನ ಪುಷ್ಟಿಯನ್ನು ಕೊಟ್ಟವು. ಸಾಮಾಜಿಕ ರುಜಿನಗಳಿಗೆಲ್ಲ ವಾಸ್ತವತೆಯೊಂದೇ ಸರ್ವೌಷಧಿ ಎಂದು ಭಾವಿಸಿದ ತರುಣ ಸಾಹಿತಿಗಳಲ್ಲಿ ಕಾನ್ರಾಡ್ ಪ್ರಮುಖನಾದವ.  

 

(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ